ನಮ್ಮ ಬಗ್ಗೆ...

ಶ್ರೀಮತಿ. ಗಂಗಮ್ಮ ಕೇಶವಮೂರ್ತಿ, ಅಧ್ಯಕ್ಷರು
ಕನ್ನಡ ನಾಡಿನಲ್ಲಿ ಗಮಕ ಕಲೆಯು ಕಾವ್ಯ ಸಾಹಿತ್ಯ, ಸಂಗೀತಗಳನ್ನು ಮೈಗೂಡಿಸಿಕೊಂಡು ಹಾಸು ಹೊಕ್ಕಾಗಿ ಬೆಳೆದು ಬಂದಿದೆ. ಕರಾವಳಿ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕಗಳಲ್ಲಿ ಪ್ರಾದೇಶಿಕವಾಗಿ ತುಸು ಭಿನ್ನತೆಯಿಂದ ಕೂಡಿದ್ದರೂ, ಒಟ್ಟಂದವಾಗಿ ಗಮಕ ಕಲೆಯು ನಾಡಿನಾದ್ಯಂತ ಹರಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಪ್ರಾಚೀನತೆಯ ದೃಷ್ಟಿಯಿಂದ ವೇದ ಕಾಲೀನವೆಂದು ಹೇಳಬಹುದಾದರೂ, ಆದಿಕವಿ ವಾಲ್ಮೀಕಿಯೇ ಗಮಕ ಕಲೆಯ ಪ್ರಥಮ ಗುರುವೆಂದೂ ಅಯೋಧ್ಯಾರಾಮನ ಮಕ್ಕಳಾದ ಲವಕುಶರೇ ಪ್ರಥಮ ಗಮಕಿಗಳೆಂದೂ ಬಲ್ಲವರು ಹೇಳುತ್ತಾರೆ. ಅದು ಹೇಗೂ ಇರಲಿ; ಕಾವ್ಯದ ಹುಟ್ಟಿನೊಂದಿಗೆ ಕಾವ್ಯವಾಚನ ಪ್ರಕ್ರಿಯೆಯೂ ಪ್ರಾರಂಭವಾಯಿ-ತೆನ್ನುವುದು ನಿರ್ವಿವಾದ.

ಮುಂದೆ ಓದಿ...

ಕರ್ನಾಟಕ ಗಮಕ ಕಲಾ ಪರಿಷತ್ತಿನ ಮುಖ್ಯ ಧ್ಯೇಯೋದ್ದೇಶಗಳು ಈ ಕೆಳಗಿನಂತಿವೆ:

೧. ಕರ್ನಾಟಕದ ಜನತೆಯಲ್ಲಿ ಪ್ರಾಚೀನವಾದ ಗಮಕ ಕಲೆಯ ಬಗೆಗೆ ಆದರಾಭಿಮಾನವನ್ನು, ಆಸಕ್ತಿಯನ್ನು ಬೆಳೆಸುವುದು.
೨. ಎಲ್ಲಾ ಕಾಲದ, ಎಲ್ಲಾ ಪ್ರಕಾರಗಳ ಕನ್ನಡ ಕಾವ್ಯಗಳ ವಾಚನ ವ್ಯವಸ್ಥೆ ಮಾಡುವುದು.
೩. ಗಮಕ ಕಲಾವಿದರ ಸಮ್ಮೇಳನ, ವಿಚಾರಗೋಷ್ಠಿ, ವಿಶೇಷ ಕಾರ್ಯಾಗಾರಗಳನ್ನು ಏರ್ಪಡಿಸುವುದು....
ಮುಂದೆ ಓದಿ...


ಕಾಯ್ದೆಹಕ್ಕುಗಳು© ಕರ್ನಾಟಕ ಗಮಕ ಕಲಾ ಪರಿಷತ್ತು (ರಿ) 2018 | info@karnatakagamakakala.org