Raga perceptive skills made easy and faster by learning Gamaka Kale

ಗಮಕ ಕಲೆ ಕಲಿಯುವಿಕೆಯಿಂದ ರಾಗ ಗ್ರಹಿಕೆ ಸುಲಭ ಮತ್ತು ತ್ವರಿತ

About Us

ಪರಿಷತ್ತಿನ ಬಗ್ಗೆ

Karnataka Gamaka Kala Parishath was incepted on the 2nd of October 1982, with the primary aim of promoting the Gamaka Art form and facilitating complementing activities.

ಕರ್ನಾಟಕ ಗಮಕ ಕಲಾ ಪರಿಷತ್ತು ಗಮಕ ಕಲಾಪ್ರಕಾರವನ್ನು ಪ್ರಸಾರ ಮಾಡುವ ಮತ್ತು ಪೂರಕವಾದ ಚಟುವಟಿಕೆಗಳಿಗೆ ಅನುಕೂಲ ಒದಗಿಸುವ ಮುಖ್ಯೋದ್ದೇಶದೊಂದಿಗೆ ೦೨ ಅಕ್ಟೋಬರ್ ೧೯೮೨ರಂದು ರೂಪ ತಳೆಯಿತು.

Read More ಮತ್ತಷ್ಟು ಓದಿ
President Speaks
ಅಧ್ಯಕ್ಷರ ಮಾತು

Karnataka Gamaka Kala Parishath is just short of turning 40 years! Starting its journey on 02 October 1982, in the last 39 years it has achieved many milestones and also gone through umpteen ups and downs. Still, we have quite a distance to go...

ಕರ್ನಾಟಕ ಗಮಕ ಕಲಾ ಪರಿಷತ್ತು ಇನ್ನೇನು ನಲವತ್ತರ ಗಡಿಯಲ್ಲಿದೆ. ಅಕ್ಟೋಬರ್ 2, 1982ರಿಂದ ಈವರೆಗಿನ 39 ವರ್ಷಗಳಲ್ಲಿ ಪರಿಷತ್ತು ನಡೆದ ಹಾದಿ ಹತ್ತು ಹಲವು ಏರು-ಜಾರುಗಳದ್ದು. ಎಲ್ಲವನ್ನೂ ದಾಟಿ ಬಂದ ಪರಿಷತ್ತು ಇನ್ನೂ ಬಹಳ ದೂರವನ್ನು ಕ್ರಮಿಸಬೇಕಾಗಿದೆ.

Gamaka is a royal feast that can easily reach and appeal to the common man. It is a divine experience for every person inclined towards fine arts, to savour this feast. This will definitely touch a cultural chord in every individual. This is possible for those who relish the Art of Gamaka. Thus, it is imperative today that every household should embrace Gamaka, its artistic flavour, develop an abiding love for literature of yester years... This is a Yajna – a sacrifice - to publicise and promote Gamaka.

ಗಮಕವು ಜನಸಾಮಾನ್ಯರನ್ನು ಸುಲಭವಾಗಿ ತಲುಪುವ ಒಂದು ರಸದೌತಣ. ಇದರ ರುಚಿಯು ಪ್ರತಿಯೊಂದು ಕಲಾಸಕ್ತ ಹೃದಯಕ್ಕೂ ಅನುಭವವಾಗಬೇಕು. ಅದರಿಂದ ಪ್ರಜಾವರ್ಗ ಹೆಚ್ಚು ಸುಸಂಸ್ಕೃತರಾಗಬೇಕು. ಗಮಕಕ್ಕೆ ಒಲಿದ ಜನರಿಗೆ ಇದು ಸಾಧ್ಯ. ಹೀಗಾಗಿ, ಇಂದು ನಾಡಿನ ಮನೆಮನೆಗೆ ಗಮಕದ ಪರಿಚಯ, ಕಲಾವಂತಿಕೆ, ಸಾಹಿತ್ಯಪ್ರೇಮ, ಸಾಹಿತ್ಯಾಸಕ್ತಿ ಇವುಗಳು ಹರಡಬೇಕಾಗಿದೆ. ಇದೊಂದು ಗಮಕ ಪ್ರಸಾರ-ಪ್ರಚಾರ ಯಜ್ಞ. ಪರಿಷತ್ತು ಸಂಕಲ್ಪಿತ ಯಜ್ಞವೇದಿಕೆ.

This is an all pervasive Age of Technology. The solemn vow of spreading the Art of Gamaka will face hurdles without the use of technology. Realizing this, the Parishath has started using technology in almost every one of its activities.

ಇದು ತಂತ್ರಜ್ಞಾನದ ಯುಗ. ತಂತ್ರಜ್ಞಾನದ ಸಹಾಯವಿಲ್ಲದೆ ಈ ಗಮಕಯಜ್ಞದ ಪ್ರಯತ್ನಗಳು ಅಪೂರ್ಣ; ಮುಂದಿನ ನಡೆ ಮಂದಗತಿಯದು; ಕಷ್ಟಸಾಧ್ಯ. ಈಗ ಪರಿಷತ್ತು ತನ್ನ ಎಲ್ಲ ಚಟುವಟಿಕೆಗಳಲ್ಲೂ ಅವಕಾಶವಿದ್ದಷ್ಟೂ ತಂತ್ರಜ್ಞಾನವನ್ನು ಬಳಸಲು ಪ್ರಾರಂಭಿಸಿದೆ ಎನ್ನುವುದು ಸಂತೋಷದ ಬೆಳವಣಿಗೆ.

One such application is to build a new, improved and upgraded website for the Parishath. This website is intended not to be just a billboard, but a communication platform for its activities, programs, plans, other promotional plans; to be actively supported with due participation by the Gamaka fraternity the world over. With this intention, the website is redesigned to be more purposeful, improved, regularly upgraded and most importantly very user friendly, from time to time.

ಇಂತಹ ಒಂದು ಪ್ರಯತ್ನ ಪರಿಷತ್ತಿನ ಈ ಹೊಸದಾದ ಸುಧಾರಿತ ಜಾಲತಾಣ. ಇದು ಕೇವಲ ಮಾಹಿತಿಯ ಭಿತ್ತಿಯಾಗಿ ಮಾತ್ರವೇ ಉಳಿಯದೆ ಪ್ರಪಂಚದ ಎಲ್ಲೆಡೆಯ ಗಮಕಾಭಿಮಾನಿಗಳೂ ಪರಿಷತ್ತಿನ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ, ಚಿಂತನೆಗಳಲ್ಲಿ, ಅನ್ಯಾನ್ಯ ಪ್ರಸಾರಪ್ರಯತ್ನಗಳಲ್ಲಿ ಸಂವಹನ ನಡೆಸುವಂತೆ, ಪಾಲ್ಗೊಳ್ಳುವಂತೆ ಆಗಬೇಕು. ಈ ಉದ್ದೇಶಕ್ಕೆ ಮನಕೊಟ್ಟು ಈಗಿನ ಜಾಲತಾಣವನ್ನು ಮರುವಿನ್ಯಾಸಗೊಳಿಸಲಾಗಿದೆ. ತತ್ಕಾಲದ ಇದರ ಸ್ವರೂಪವು ಕಾಲಾನುಕಾಲದ ಅಗತ್ಯಗಳಿಗೆ ಅನುಸಾರವಾಗಿ ರೂಪುಗೊಳ್ಳುತ್ತ, ಸುಧಾರಿತವಾಗುತ್ತ, ಹೆಚ್ಚು ಹೆಚ್ಚು ಉಪಯುಕ್ತವಾಗುತ್ತ, ಆಕರ್ಷಕವಾಗುತ್ತ ಬೆಳೆಯುವಂತಾಗಲಿ, ಇದಕ್ಕೆ ಎಲ್ಲರ ಸಹಕಾರವಿರಲಿ ಎಂಬುದು ಆಶಯ.

In short, the intention of the Parishath with this redesigned website is for all the existing active members to join hands here, to put the website to frequent use, to get the inactive/erstwhile members back in to the mainstream, to enrol new people, to suggest improvements to the website, and the younger volunteers to offer services to maintain the website etc. This should eventually make the website the waterhole or ‘Go to site’ of the Gamaka fraternity, drawing a large number of active visitors. We hope that the website would be useful to everyone who visits it. This is not just the desire of just the Parishath but also of every gamaka loving person world over. May Gamaka Flourish. May Gamaka Live Long.

ಪರಿಷತ್ತಿನ ಕನಸು, ಕಳಕಳಿ ಇದು - ಸಕ್ರಿಯ ಸದಸ್ಯರು ಈ ಪ್ರಯತ್ನದ ಜೊತೆಗೆ ಕೈಗೂಡಿಸಬೇಕು, ಈ ಜಾಲತಾಣವನ್ನು ಹೆಚ್ಚು ಹೆಚ್ಚು ಬಳಸಬೇಕು, ತಮ್ಮ ಸಂಪರ್ಕದಲ್ಲಿನ ತಟಸ್ಥ / ನಿಷ್ಕ್ರಿಯ ಸದಸ್ಯರನ್ನು ಜಾಗೃತಗೊಳಿಸಿ ಇಲ್ಲಿಗೆ ತರಬೇಕು, ಹೊಸಬರನ್ನು ಸೇರಿಸಿಕೊಳ್ಳಬೇಕು, ಜಾಲತಾಣದ ನಿರಂತರ ಸುಧಾರಣೆಗೆ ಸಲಹೆಗಳನ್ನು ಕೊಡಬೇಕು, ಜಾಲತಾಣದ ನಿರ್ವಹಣೆಗೆ ಯುವಪೀಳಿಗೆ ಮುಂದಾಗಬೇಕು - ಒಟ್ಟಿನಲ್ಲಿ ಪರಿಷತ್ತಿನ ಜಾಲತಾಣವು ಕಾಲಕ್ರಮದಲ್ಲಿ ಗಮಕದ ಕೆಲಸಕ್ಕೊಂದು ಪರಿಣಾಮಕಾರಿ ಸಾಧನವಾಗಬೇಕು.

ಗಮಕಾಭಿಮಾನಿಗಳು, ಗಮಕಕಲಾರಸಿಕರು, ಗಮಕಾಸಕ್ತರು, ಗಮಕಾಭ್ಯಾಸಿಗಳು, ಗಮಕಾಧ್ಯಾಪಕರು, ಗಮಕಶ್ರೋತೃಗಳು, ಹೀಗೆ ಎಲ್ಲರಿಗೂ ಈ ಜಾಲತಾಣವು - ಆಂಗ್ಲದಲ್ಲಿ ವನ್ಯಜೀವಿಗಳು ನಂಬಿಕೊಂಡಿರುವ ಜಲತಾಣದ (ವಾಟರ್ ಹೋಲ್) ಹಾಗೆ - ಗಮಕಪರಿವಾರದ "ಜಲತಾಣ"ವಾಗಬೇಕು. ಇಲ್ಲಿಂದ ಎಲ್ಲರೂ ಒಂದಲ್ಲೊಂದು ಬಗೆಯಲ್ಲಿ ತಮ್ಮ ಗಮಕ-ಕಾವ್ಯ-ಸಾಹಿತ್ಯ ತೃಷೆಯನ್ನು ನೀಗಿಸಿಕೊಳ್ಳುವಂತಾಗಬೇಕು. ಇದು ಪರಿಷತ್ತಿನ ಆಶಯವೇ ಆಗದೆ ನಾಡಿನ ಎಲ್ಲರ ಆಶಯವೂ ಆಗಬೇಕು.

ಗಮಕ ಬೆಳೆಯಲಿ. ಗಮಕ ಬಾಳಲಿ.

About Gamaka

ಗಮಕವನ್ನು ಕುರಿತು

Gamaka is said to be a very old and a legendary art form, dating back to the times of the Ramayana. Sage Valmiki is said to have taught the gamaka style of singing to the twin sons of Lord Rama, Lava and Kusha. Gamaka is a traditional art unique to Karnataka. It involves rendering of the verses from historical poetic works in Kannada, like Kumaravyasa Bharata and Torave Ramayana, setting them to music and delivering commentary for each stanza of the poetry.

In olden days, Gamakies formed a part of Maharaja's court. However, their art was not limited to the palace. They sang at temples, social celebrations, village gatherings, and at every venue that offered an opportunity to sing, popularising the art among the commons.

ಗಮಕ ಕಲೆಯು ರಾಮಾಯಣ ಕಾಲದಷ್ಟು ಪ್ರಾಚೀನ ಕಲೆಯೆಂದು ಸಿದ್ಧವಾಗಿದೆ. ವಾಲ್ಮೀಕಿ ಮಹರ್ಷಿಯು ಕುಶ-ಲವರಿಗೆ ರಾಮಾಯಣ ಕಾವ್ಯವನ್ನು ಹಾಡಿಸಿದ್ದು ಮೊದಲ ಗಮಕ ಶೈಲಿಯೆಂದು ತಿಳಿಯಲಾಗಿದೆ.

ಗಮಕವು ಕನ್ನಡ ನಾಡಿಗೇ ವಿಶಿ‍ಷ್ಟವೆನಿಸಿರುವ ಒಂದು ಕಲಾಪರಂಪರೆ. ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಮೊದಲಾದ ಕನ್ನಡದ ಪ್ರಾಚೀನ ಕಾವ್ಯ-ಮಹಾಕಾವ್ಯಗಳನ್ನು ಸುಶ್ರಾವ್ಯವಾಗಿ, ಪ್ರತಿಯೊಂದು ಪದ್ಯವನ್ನೂ ರಸಪ್ರಧಾನವಾಗಿಯೂ ರಂಜನೀಯವಾಗಿಯೂ ಹಾಡಿ ಪ್ರಸ್ತುತಪಡಿಸುವುದು ಗಮಕದ ಪ್ರಧಾನ ಭಾಗ. ಕಾಲಾಂತರದಲ್ಲಿ ಹೀಗೆ ವಾಚನ ಮಾಡಿದ ಪದ್ಯಗಳ ಭಾವ-ಅರ್ಥಗಳು ತೀರ ಸಾಮಾನ್ಯ ಜನರಿಗೂ ತಿಳಿಯಲೆನ್ನುವ ಕಾರಣಕ್ಕೆ ಅವುಗಳಿಗೆ ವ್ಯಾಖ್ಯಾನವನ್ನು ಮಾಡುವ ಪದ್ಧತಿಯೂ ರೂಢಿಗೆ ಬಂದಿತು.

Read More ಮತ್ತಷ್ಟು ಓದಿ