Raga identification made easy & faster by learning Gamaka

ಗಮಕ ಕಲಿಯುವಿಕೆಯಿಂದ ರಾಗ ಕಂಡುಹಿಡಿಯುವುದು ಸುಲಭ ಮತ್ತು ತ್ವರಿತ

About Gamaka

ಪರಿಷತ್ತಿನ ಬಗ್ಗೆ

About Gamaka ಗಮಕವನ್ನು ಕುರಿತು

Gamaka is said to be a very old and a legendary art form, dating back to the times of the Ramayana. Sage Valmiki is said to have taught the gamaka style of singing to the twin sons of Lord Rama, Lava and Kusha. Gamaka is a traditional art unique to Karnataka. It involves rendering of the verses from historical poetic works in Kannada, like Kumaravyasa Bharata and Torave Ramayana, setting them to music and delivering commentary for each stanza of the poetry.

In olden days, Gamakies formed a part of Maharaja's court. However, their art was not limited to the palace. They sang at temples, social celebrations, village gatherings, and at every venue that offered an opportunity to sing, popularising the art among the commons. Despite these efforts the art gradually faded into oblivion. Fortunately, it was revived during the 20th century by eminent litterateurs like Prof. A.R. Krishna Shastry and Dr D.V. Gundappa. Gamaka gained a firmer ground during G. Narayana's tenure as Kannada Sahitya Parishath's President and later as the First President of the Karnataka Gamaka Kala Parishath (1982).

Some of the early gamakies of the last century include Abhinava Kalidasa Late Basavappa Shastry, Late Bharat Bindurao, Late Krishnagiri Krishna Rao and Late Shakuntalabai Panduranga Rao. This genre has continued to the present day with names like Late B.S.S. Koushik, Hosahalli Keshavamurthy, Gangamma Keshavamurthy et al.

ಗಮಕ ಕಲೆಯು ರಾಮಾಯಣ ಕಾಲದಷ್ಟು ಪ್ರಾಚೀನ ಕಲೆಯೆಂದು ಸಿದ್ಧವಾಗಿದೆ. ವಾಲ್ಮೀಕಿ ಮಹರ್ಷಿಯು ಕುಶ-ಲವರಿಗೆ ರಾಮಾಯಣ ಕಾವ್ಯವನ್ನು ಹಾಡಿಸಿದ್ದು ಮೊದಲ ಗಮಕ ಶೈಲಿಯೆಂದು ತಿಳಿಯಲಾಗಿದೆ.
ಗಮಕವು ಕನ್ನಡ ನಾಡಿಗೇ ವಿಶಿ‍ಷ್ಟವೆನಿಸಿರುವ ಒಂದು ಕಲಾಪರಂಪರೆ. ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಮೊದಲಾದ ಕನ್ನಡದ ಪ್ರಾಚೀನ ಕಾವ್ಯ-ಮಹಾಕಾವ್ಯಗಳನ್ನು ಸುಶ್ರಾವ್ಯವಾಗಿ, ಪ್ರತಿಯೊಂದು ಪದ್ಯವನ್ನೂ ರಸಪ್ರಧಾನವಾಗಿಯೂ ರಂಜನೀಯವಾಗಿಯೂ ಹಾಡಿ ಪ್ರಸ್ತುತಪಡಿಸುವುದು ಗಮಕದ ಪ್ರಧಾನ ಭಾಗ. ಕಾಲಾಂತರದಲ್ಲಿ ಹೀಗೆ ವಾಚನ ಮಾಡಿದ ಪದ್ಯಗಳ ಭಾವ-ಅರ್ಥಗಳು ತೀರ ಸಾಮಾನ್ಯ ಜನರಿಗೂ ತಿಳಿಯಲೆನ್ನುವ ಕಾರಣಕ್ಕೆ ಅವುಗಳಿಗೆ ವ್ಯಾಖ್ಯಾನವನ್ನು ಮಾಡುವ ಪದ್ಧತಿಯೂ ರೂಢಿಗೆ ಬಂದಿತು.
ಹಿಂದೊಂದು ಕಾಲದಲ್ಲಿ ಗಮಕಿಗಳು ಮಹಾರಾಜರ ಆಸ್ಥಾನದ ಒಂದು ಭಾಗವಾಗಿದ್ದರು. ಆದರೆ ಅವರ ಕಲೆಯು ಅರಮನೆಗಳ ಆಸ್ಥಾನಗಳಿಗೇ ಸೀಮಿತವಾಗದೆ, ದೇವಾಲಯಗಳಲ್ಲಿ, ಸಾಮಾಜಿಕ ಸಮಾರಂಭಗಳಲ್ಲಿ, ಗ್ರಾಮಗಳಲ್ಲಿನ ಚಾವಡಿಗಳಲ್ಲಿ ಹೀಗೆ ಎಲ್ಲೆಲ್ಲಿ ಅವಕಾಶವಿದ್ದಿತೋ ಅಲ್ಲಿ ಎಲ್ಲೆಡೆಯೂ ಗಮಕವನ್ನು ವಾಚನ ಮಾಡಿ ಖ್ಯಾತಿಗೊಳಿಸುವ ಕೆಲಸವು ನಡೆದಿತ್ತು. ಇಷ್ಟು ಪ್ರಯತ್ನಗಳು ನಡೆದಾಗ್ಯೂ ಗಮಕ ಕಲೆಯು ಯಾವುದೋ ಒಂದು ಕಾಲಘಟ್ಟದಲ್ಲಿ ಹಿಮ್ಮೆಟ್ಟಲು ಮೊದಲಾಯಿತು. ಪುಣ್ಯವಶದಿಂದಾಗಿ, ಈ ಕಲೆಯು ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಸಿದ್ಧ-ಪ್ರಸಿದ್ಧ ಸಾಹಿತಿಗಳೆನಿಸಿದ ಪ್ರೊ. ಎ.ಆರ್.ಕೃ‍ಷ್ಣಶಾಸ್ತ್ರಿಗಳು ಮತ್ತು ಡಾ. ಡಿ.ವಿ. ಗುಂಡಪ್ಪನವರಂತಹ ದಿಗ್ದಂತಿಗಳ ಆಸಕ್ತಿ-ತಪಸ್ಸುಗಳಿಂದಾಗಿ ಮತ್ತೆ ಅರಳಿತು. ನಂತರ ಗಮಕ ಕಲೆಗೆ ಇನ್ನಷ್ಟು ಗಟ್ಟಿ ನೆಲೆ ದೊರೆತದ್ದು ೧೯೮೨ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ. ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಸ್ಥಾಪನೆಯಾದಾಗ.

ಹೀಗೆ ಗಮಕ ಕಲೆಯ ಪುನರುಜ್ಜೀವನಕ್ಕೆ ಸೊಗಸಾದ ಈ ಘಟ್ಟದಲ್ಲಿ ಗಮಕಸೇವೆಯನ್ನು ಅನನ್ಯವಾಗಿ ನಡೆಸಿದ ಕೆಲವರ ಹೆಸರುಗಳನ್ನಾದರೂ ಇಲ್ಲಿ ಸ್ಮರಣೆ ಮಾಡಿಕೊಳ್ಳದಿದ್ದರೆ ಕಳೆದ ಶತಮಾನದ ಗಮಕ ಇತಿಹಾಸದ ಸ್ರೋತವು ಅಲ್ಲಲ್ಲಿ ನಿಂತಂತಾದೀತು. ಇಂಥ ಸದಾಸ್ಮರಣೀಯರೆಂದರೆ, ಅಭಿನವ ಕಾಳಿದಾಸರೆಂದು ಕೀರ್ತರಾಗಿದ್ದ ಬಸವಪ್ಪ ಶಾಸ್ತ್ರಿಗಳು, ಭಾರತ ಬಿಂದೂರಾಯರು, ಕೃ‍ಷ್ಣಗಿರಿ ಕೃಷ್ಣರಾಯರು, ಶಕುಂತಲಾ ಪಾಂಡುರಂಗ ಮುಂತಾದವರು. ಈ ಘನವಾದ ಪರಂಪರೆಯ ಮುಂದುವರಿಕೆಗೆ ಕಾರಣರಾದ ಪ್ರಸಕ್ತ ಕಾಲದ ಹೆಸರುಗಳೆಂದರೆ ಕೀರ್ತಿಶೇ‍ಷ ಬಿ.ಎಸ್.ಎಸ್.ಕೌಶಿಕರು, ಹೊಸಹಳ್ಳಿ ಕೇಶವಮೂರ್ತಿಗಳು, ಗಂಗಮ್ಮ ಕೇಶವಮೂರ್ತಿಯವರು ಮೊದಲಾದವರು.

ಪರಿಷತ್ತಿನ ಬಗ್ಗೆ

ಕರ್ನಾಟಕ ಗಮಕ ಕಲಾ ಪರಿಷತ್ತು ಗಮಕ ಕಲಾಪ್ರಕಾರವನ್ನು ಪ್ರಸಾರ ಮಾಡುವ ಮತ್ತು ಪೂರಕವಾದ ಚಟುವಟಿಕೆಗಳಿಗೆ ಅನುಕೂಲ ಒದಗಿಸುವ ಮುಖ್ಯೋದ್ದೇಶದೊಂದಿಗೆ ೦೨ ಅಕ್ಟೋಬರ್ ೧೯೮೨ರಂದು ರೂಪ ತಳೆಯಿತು.

About us

Karnataka Gamaka Kala Parishath was incepted on the 2nd of October 1982, with the primary aim of promoting the Gamaka Art form and facilitating complementing activities.

ಪರಿಷತ್ತಿನ ಮುಖ್ಯ ಧ್ಯೇಯೋದ್ದೇಶಗಳು

ಕರ್ನಾಟಕ ಗಮಕ ಕಲಾ ಪರಿಷತ್ತಿನ ಮುಖ್ಯ ಧ್ಯೇಯೋದ್ದೇಶಗಳು ಈ ಕೆಳಗಿನಂತಿವೆ:

೧. ಪ್ರಜಾಸಮೂಹದಲ್ಲಿ ಪ್ರಾಚೀನವಾದ ಗಮಕ ಕಲೆಯ ಬಗೆಗೆ ಆದರಾಭಿಮಾನ, ಆಸಕ್ತಿಗಳನ್ನು ಮೂಡಿಸಿ ಬೆಳೆಸುವುದು.

೨. ಎಲ್ಲ ಕಾಲಘಟ್ಟದ, ಎಲ್ಲ ಪ್ರಕಾರದ ಕನ್ನಡ ಕಾವ್ಯಗಳ ವಾಚನ-ವ್ಯಾಖ್ಯಾನಗಳನ್ನು ವ್ಯಾಪಕವಾಗಿ ವ್ಯವಸ್ಥೆ ಮಾಡುವುದು.

೩. ಗಮಕ ಕಲಾವಿದರ ಸಮ್ಮೇಳನ, ವಿಚಾರಗೋಷ್ಠಿ, ವಿಶೇಷ ಕಾರ್ಯಾಗಾರಗಳನ್ನು ಏರ್ಪಡಿಸುವುದು.

೪. ರಾಜ್ಯಾದ್ಯಂತ ವಿವಿಧ ಗಮಕ ಶೈಕ್ಷಣಿಕ ತರಗತಿಗಳನ್ನು ತೆರೆದು ಪಾಠ, ಪ್ರವಚನಗಳನ್ನು ನಡೆಸುವುದು. ಪರೀಕ್ಷೆಗಳನ್ನು ನಡೆಸಿ ಅರ್ಹತಾ ಪತ್ರಗಳನ್ನು ನೀಡುವುದು.

೫. ಕಾವ್ಯವಾಚನದ ಗುಣಮಟ್ಟವನ್ನು ಅಭಿವೃದ್ಧಿಗೊಳಿಸಲು ಶಿಕ್ಷಣ-ತರಬೇತಿ ಶಿಬಿರಗಳನ್ನು ನಡೆಸುವುದು.

೬. ಗಮಕ ಕಲೆಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವುದು.

೭. ಗಮಕ ಸಂಬಂಧೀ ಶಾಸ್ತ್ರಗ್ರಂಥಗಳು, ಪಠ್ಯಪುಸ್ತಕಗಳು, ಕಾವ್ಯಗಳು, ಅನ್ಯಾನ್ಯ ಗಮಕಸಾಹಿತ್ಯಗಳನ್ನು ಪ್ರಕಟಿಸುವುದು.

೮. ಗಮಕಕಲೆಯ ಪುನರುಜ್ಜೀವನ-ಪ್ರಸರಣದಂತಹ ಮಹತ್ತರ ಸೇವೆಯಲ್ಲಿ ತೊಡಗಿರುವ ಗಮಕಿಗಳನ್ನು ಗುರುತಿಸಿ ಗೌರವಿಸುವುದು.

೯. ಪ್ರಾಚೀನ ಕವಿಗಳ ಜಯಂತ್ಯುತ್ಸವಗಳನ್ನು ಆಚರಿಸಿ, ಆ ಮೂಲಕ ಅವರ ಕಾವ್ಯಗಳನ್ನು ಜನರಿಗೆ ಪರಿಚಯಿಸುವುದು.

೧೦. ರಾಜ್ಯಾದ್ಯಂತ ಗಮಕ ಕಲೆಯ ಪ್ರಚಾರಕ್ಕಾಗಿ ಗಮಕಿಗಳ ಮತ್ತು ವಿದ್ವಾಂಸರ ಪ್ರವಾಸಗಳನ್ನು ಏರ್ಪಡಿಸುವುದು.

೧೧. ಪ್ರಸಿದ್ಧ ಗಮಕಿಗಳ ಕಾವ್ಯವಾಚನಗಳನ್ನು ಧ್ವನಿ ಮುದ್ರಿಸಿ, ಗಮಕ ಕಲಾಸಕ್ತರಿಗೆ ಒದಗಿಸುವುದು.

೧೨. ಆಧುನಿಕ ಕಾವ್ಯಗಳಿಗೆ ಗಮಕ ಕಲೆಯನ್ನು ಅನ್ವಯಿಸಲು ಪ್ರಯೋಗ ಮಾರ್ಗಗಳನ್ನು ಕೈಗೊಳ್ಳುವುದು.

೧೩. ಗಮಕ ಕಲೆಯ ಉಳಿವು-ಬೆಳವಿಗೆ ಅಗತ್ಯವಾದ ಅನ್ಯಾನ್ಯ ಕಾರ್ಯಕ್ರಮಗಳನ್ನು ನಡೆಸುವುದು.

Objectives

With an intent of enhancing the position of ‘Karnataka's legendary gamaka art’ to be at par with other fine art forms, objectives of Karnataka Gamaka Kala Parishath are as follows:

  • Get the people interested and drawn towards the legendary Gamaka Art
  • Organize Vachana-Vyakhyaana of Kannada kavyaas on an ongoing basis
  • Have gamaka artists and interested folks participate in workshops and seminars focussed on Gamaka art
  • Conduct gamaka classes, exams and provide qualifying certificates
  • Organize workshops focussed on enhancing gamaka vachana and gamaka vyakhyaana skills
  • Promote & deepen research in gamaka field
  • Publish gamaka related grammar books (“shashtragalu”), textbooks, kavyaas and literature.
  • Recognise and reward gamakies with outstanding contribution
  • Conduct Jayanthies of poets and thereby introduce/popularise their works through vachana and vyakhyaana
  • Have famous gamakies and litterateurs, travel all around Karnataka, to propagate and promote gamaka art
  • Provide the recording of famous gamakies vachana to gamaka art lovers
  • Explore alternate ways of applying gamaka art to modern kavyaas
  • Continued exploration of ways to promote the gamaka art
Genesis and Growth ಪರಿಷತ್ತಿನ ಮೂಲ ಮತ್ತು ಸಾಗಿ ಬಂದ ಹಾದಿ

The year was 1930. Sri M Raghavendra Rao, an ardent Gamaki, migrated from Mysore to Bangalore. Here, in Bangalore, he along with scholars like Sri Subodha Rama Rao and Sri Varadam Rama Rao, were presenting Gamaka programs at Kannada Sahitya Parishath and other places.

At this time, he came under the guidance of the then President of the Sahitya Parishath, Masti Venkatesh Iyengar, who encouraged Sri Raghavendra Rao. As the Convenor of Gamaka Classes at the Kannada Sahitya Parishath, he rendered venerable service to the art of Gamaka for over two decades.

With involved support from stalwarts and scholars like Prof G Venkatasubbaiah, Sri M R Srinivasamurthy, Sri A N Murthi Rao and Masti, the art of Gamaka flourished well. At this stage, Sri Raghavendra Rao had to return to Mysore, where he continued his Gamaka services, along with his third son. This resulted in the forming of an Association of Gamakies, under the banner Kavya Ranjini Sabha, which continues to be active even today. Over the time, many of the scholars who attended and participated in the Sabha activities strongly felt the need for a separate Academy to promote the art of Gamaka with greater and sustained vigour.

This thought combined with the urge of Sri Raghavendra Rao, led to the inception of Karnataka Gamaka Kala Parishath, on October 2, 1982. The Parishath started functioning from the venue in Thyagarajanagar, Bangalore. Sri G Narayana and Sri Raghavendra Rao took charge as the President and Vice President respectively. There were other leading scholars that were inducted as the other members/office bearers of the Parishath. At this time, District Representatives were also identified.

Over the last 38 years, Karnataka Gamaka Kala Parishath has worked tirelessly to popularise the art of Gamaka. The Parishath has identified and designated select gamakies as District Representatives to coordinate the Gamaka activities at local level.

ಅದು ಇಸವಿ ೧೯೩೦. ಕಟ್ಟಕ್ಕರೆಯ ಗಮಕಿಗಳಾಗಿ ಹೆಸರಾಗಿದ್ದ ಶ್ರೀ ಎಂ. ರಾಘವೇಂದ್ರರಾಯರು ಮೈಸೂರಿನಿಂದ ಬೆಂಗಳೂರಿಗೆ ವಲಸೆ ಬಂದರು. ಬೆಂಗಳೂರನ್ನು ಸೇರಿದ ಅವರು ಶ್ರೀ ಸುಬೋಧ ರಾಮರಾಯರು ಮತ್ತು ಶ್ರೀ ವರದಂ ರಾಮರಾಯರಂತಹ ಪಂಡಿತಮಾನ್ಯರ ಸಹಚರ್ಯೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತಿತರ ವೇದಿಕೆಗಳಲ್ಲಿ ಗಮಕ ಕಾರ್ಯಕ್ರಮಗಳನ್ನು ನೀಡಲು ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರರಾಯರು ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ ಮಾರ್ಗದರ್ಶನಕ್ಕೊಳಗಾಗಿ, ಅವರಿಂದ ಉತ್ತೇಜನವನ್ನು ಪಡೆದರು. ಪರಿಷತ್ತಿನಲ್ಲಿನ ಗಮಕ ತರಗತಿಗಳ ನಿರ್ವಾಹಕರಾಗಿ ರಾಯರು ಸುಮಾರು ಎರಡು ದಶಕಗಳಿಗೂ ಹೆಚ್ಚಿನ ದೀರ್ಘಕಾಲ ಗಮಕ ಕಲೆಗಾಗಿ ಅಪೂರ್ವವಾದ ಶ್ಲಾಘ್ಯವಾದ ಸೇವೆಯನ್ನು ಸಲ್ಲಿಸಿದರು.

ಅಂದಿನ ಹೆಸರಾಂತರಾದವರೂ ಪಂಡಿತಜನರೂ ಆಗಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯನವರು, ಶ್ರೀ ಎಂ.ಆರ್. ಶ್ರೀನಿವಾಸಮೂರ್ತಿಯವರು, ಶ್ರೀ ಎ.ಎನ್.ಮೂರ್ತಿರಾಯರು, ಮತ್ತು ಶ್ರೀ ಮಾಸ್ತಿಯವರ ಪಾತ್ರ ಮತ್ತು ಬೆಂಬಲದಿಂದ ಗಮಕ ಕಲೆಯು ಪ್ರವೃದ್ಧಮಾನಕ್ಕೆ ಬರುತ್ತಿತ್ತು.

ಈ ಹಂತದಲ್ಲಿ ಶ್ರೀ ರಾಘವೇಂದ್ರರಾಯರು ವೈಯಕ್ತಿಕ ಕಾರಣಗಳಿಂದಾಗಿ ಮತ್ತೆ ಮೈಸೂರಿಗೆ ಹಿಂದಿರುಗಬೇಕಾಗಿ ಬಂದಿತು. ಅವರು ಮೈಸೂರಿನಲ್ಲಿಯೇ, ತಮ್ಮ ಮಗನೊಡಗೂಡಿ ಗಮಕ ಕಲೆಯ ಸೇವೆಯನ್ನು ಮುಂದುವರೆಸಿದರು. ಇದರ ಫಲವಾಗಿಯೇ ಅಲ್ಲೊಂದು ಗಮಕಿಗಳ ಸಂಘವು ಕಾವ್ಯ ರಂಜನಿ ಸಭಾ ಎನ್ನುವ ಹೆಸರಿನಿಂದ ಜನ್ಮ ತಾಳಿತು. ಅಂದು ಹಾಗೆ ಪ್ರಾರಂಭವಾದ ಸಂಸ್ಥೆಯು ಇಂದೂ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.

ಕಾಲಾಂತರದಲ್ಲಿ, ಈ ಸಭೆಯ ಚಟುವಟಿಕೆಗಳಲ್ಲಿ ಭಾಗವಹಿಸುತಿದ್ದ ಕಾರ್ಯಕ್ರಮಗಳಿಗೆ ಶ್ರೋತೃಗಳಾಗಿ ಬರುತ್ತಿದ್ದ ವಿದ್ವಾಂಸರು ಗಮಕ ಕಲೆಯ ಹೆಚ್ಚಿನ ಏಳಿಗೆಯನ್ನೂ, ಭದ್ರ ನೆಲೆಯನ್ನೂ ಸಾಧಿಸಬೇಕೆಂದರೆ ಅದಕ್ಕಾಗಿಯೇ ಒಂದು ಪ್ರತ್ಯೇಕ ಪ್ರೌಢವಿದ್ಯಾಸಂಸ್ಥೆ (ಅಕಾಡೆಮಿ)ಯೊಂದು ಅಗತ್ಯವೆಂದು ಯೋಚಿಸಿದರು.

ಈ ಚಿಂತನೆಯೂ ಶ್ರೀ ರಾಘವೇಂದ್ರರಾಯರಲ್ಲಿನ ಗಮಕಸೇವೆಯ ಉತ್ಕಟೇಚ್ಛೆಯೂ ಸೇರಿ ೧೯೮೨ರ ಅಕ್ಟೋಬರ್ ೦೨ರಂದು ಗಮಕ ಕಲಾ ಪರಿಷತ್ತು ಪ್ರಾರಂಭವಾಯಿತು. ಮೊದಲು ಬೆಂಗಳೂರಿನ ತ್ಯಾಗರಾಜನಗರದಲ್ಲಿ ಕಾರ್ಯವಿಳಾಸವನ್ನು ಹೊಂದಿದ ಪರಿಷತ್ತಿನ ಪ್ರಥಮ ಅಧ್ಯಕ್ಷರಾಗಿ ಶ್ರೀ ಜಿ. ನಾರಾಯಣ ಅವರೂ ಮತ್ತು ಉಪಾಧ್ಯಕ್ಷರಾಗಿ ಶ್ರೀ ರಾಘವೇಂದ್ರರಾಯರೂ ಕಾರ್ಯಭಾರವನ್ನು ವಹಿಸಿಕೊಂಡರು. ಇವರ ಜೊತೆಗೆ ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿಯೂ, ಸದಸ್ಯರಾಗಿಯೂ ಇನ್ನನೇಕ ಪಂಡಿತರನ್ನು ಸಂಘಟಿಸಲಾಯಿತು.

ಮುಂದಿನ ಹೆಜ್ಜೆಯಾಗಿ, ಗಮಕ ಪ್ರಚಾರ-ಪ್ರಸಾರಗಳ ಕೆಲಸವನ್ನು ಪರಿಣಾಮಕಾರಿಯಾಗಿ ನಡೆಸಲು ಅನುವಾಗುವಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಗಮಕ ಪರಿಷತ್ತಿನ ಜಿಲ್ಲಾಪ್ರತಿನಿಧಿತ್ವಕ್ಕೆ ಜಿಲ್ಲಾ ಘಟಕಗಳನ್ನು ಪ್ರಾರಂಭಿಸಿ, ಅಲ್ಲಿನ ಶ್ರದ್ಧಾಳುಗಳನ್ನು ಗುರುತಿಸಿ ಅವರನ್ನು ಜಿಲ್ಲಾ ಘಟಕಗಳ ಅಧ್ಯಕ್ಷರನ್ನಾಗಿ ನಿಯುಕ್ತಿ ಮಾಡಲಾಗಿದೆ.

ಗಮಕ ಕಲೆಯ ಪ್ರಚಾರ-ಪ್ರಸಾರಗಳ ಅಂಗವಾಗಿ ಪರಿಷತ್ತು ಬಹುಸ್ತರದ ಗಮಕ ಪಠ್ಯಗಳನ್ನು ಯೋಜಿಸಿ, ದೇಶ-ವಿದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ತರಗತಿಗಳನ್ನು ನಡೆಸುತ್ತ, ವಾರ್ಷಿಕ ಪರೀಕ್ಷೆಗಳನ್ನು ನಡೆಸಿ, ಸಫಲರಾದವರಿಗೆ ಪ್ರಮಾಣಪತ್ರಗಳನ್ನು ವಿತರಿಸುತ್ತಿದೆ. ಹೀಗೆ ಪರಿಷತ್ತಿನ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಹಲವು ವಿದ್ಯಾರ್ಥಿಗಳಿಗೆ ಪರಿಷತ್ತಿನ ಪ್ರಮಾಣಪತ್ರದ ಆಧಾರದ ಮೇಲೆ ಉದ್ಯೋಗಗಳೂ ದೊರಕಿವೆ.

Besides popularising the Gamaka art, the Parishath is conducting multi-graded Gamaka examinations every year at State level and has published books on Gamaka and Gamakies.

Footprints of Karnataka Gamaka Kala Parishath ಪರಿಷತ್ತಿನ ಮೈಲಿಗಲ್ಲುಗಳು

ಗಮಕ ಕಲೆಯನ್ನೇ ಹೃತ್ಕವಾಟವಾಗಿಸಿಕೊಂಡಿರುವ ಮಾತೆ ಗಂಗಮ್ಮನವರು ಪರಿಷತ್ತಿನ ಕೇಂದ್ರವಾದ ಬೆಂಗಳೂರಿನಲ್ಲಿಯೂ ಕರ್ನಾಟಕದ ಹತ್ತು ಹಲವು ಭಾಗಗಳಲ್ಲಿಯೂ ಕಾರ್ಯಕ್ರಮಗಳನ್ನು ನಿಯೋಜಿಸುವುದು, ಜಿಲ್ಲಾ ಪ್ರತಿನಿಧಿಗಳೊಂದಿಗೆ ಸಂಪರ್ಕಿಸಿ ಅವರನ್ನು ಗಮಕಸೇವೆಗೆ ಪ್ರೋತ್ಸಾಹಿಸುವುದು, ಶಾಲಾವಿದ್ಯಾರ್ಥಿಗಳಿಗೆ ಗಮಕವನ್ನು ಪರಿಚಯಿಸುವುದು, ಹತ್ತು ಹಲವು ಗಮಕ ಕಾರ್ಯಕ್ರಮಗಳನ್ನು ನಡೆಸುವುದು, ಜೊತೆಯ ಹಿರಿಯ-ಕಿರಿಯ ಗಮಕಿಗಳಿಗೆ ವೇದಿಕೆಯ ಅವಕಾಶಗಳನ್ನು ಒದಗಿಸಿ ಹುರಿದುಂಬಿಸುವುದು - ಹೀಗೆ ಅಹರ್ನಿಶಿ ಗಮಕಸೇವೆಯಲ್ಲಿಯೇ ಮಗ್ನರಾಗಿ ಗಮಕವನ್ನೇ ಉಸಿರಾಗಿಸಿಕೊಂಡಿದ್ದಾರೆ.

ಈ ಅವಧಿಯಲ್ಲಿ ಅವರು ಸಾಧಿಸಿದ ಮಹತ್ತರ ಸಾಹಸದ ಕೆಲಸವೆಂದರೆ ಪರಿಷತ್ತಿಗೆ ಸ್ವಂತ ಕಟ್ಟಡವೊಂದನ್ನು ಮಾಡಿದುದು. ಇದರಲ್ಲಿ ನೂರಾರು ಸಹೃದಯರ ದೇಣಿಗೆಯೂ, ಅಧ್ಯಕ್ಷರ ಅವಿರತವಾದ ಪರಿಶ್ರಮವೂ, ತನು-ಮನ-ಧನಗಳ ಪಾತ್ರವೂ ಘನವಾಗಿ ಒದಗಿದುದು ಪರಿಷತ್ತಿನ ಪುಣ್ಯಭಾಗ.

ಪರಿಷತ್ತಿನ ಧ್ಯೇಯ ಧೋರಣೆಗಳನ್ನು ಅಚಲವಾದ ಲಕ್ಷ್ಯದಲ್ಲಿರಿಸಿಕೊಂಡು ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಅನೇಕ ಜಿಲ್ಲೆಗಳಲ್ಲಿ ಜಿಲ್ಲಾ ಗಮಕ ಕಲಾ ಸಮ್ಮೇಳನಗಳು ನಡೆದು ಗಮಕ ಕಲೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ಯಶಸ್ಸನ್ನು ಪಡೆದಿವೆ.

ಈಗ ಪರಿಷತ್ತು ವಾಟ್ಸಪ್ ವೇದಿಕೆಯನ್ನು ಉಪಯೋಗಿಸಿಕೊಂಡು ನೂರಾರು ಸದಸ್ಯರ ನಡುವೆ ಸಂವಹನ, ನಿತ್ಯ ಗಮಕ ಕಾರ್ಯಕ್ರಮ, ಒಂದು ಮಟ್ಟಿನ ಪಾಠ-ಪ್ರವಚನ, ಉಪಯೋಗೀ ವಿಷಯಗಳ ಬಗ್ಗೆ ಚರ್ಚೆ - ಹೀಗೆ ಗಣನೀಯವಾಗಿ ಬೌದ್ಧಿಕ ಪ್ರಚೋದನೆಯ ಕಾರ್ಯಕ್ರಮಗಳು ಈ ವೇದಿಕೆಯಲ್ಲಿ ನಡೆಯುತ್ತಿವೆ. ಈ ಎಲ್ಲವೂ ಪರಿಷತ್ತಿನ ಅಧ್ಯಕ್ಷರು ನಿತ್ಯ ಮತ್ತು ನೇರ ಭಾಗಿಯಾಗಿ ಮುನ್ನಡೆಸುತ್ತಿದ್ದಾರೆ. ಈಗಿನ ಕೋವಿಡ್ ಪೀಡೆಯ ಸಮಯದಲ್ಲಿ ಈ ವೇದಿಕೆಯಿಂದಾಗಿ ಸದಸ್ಯರು ಸಂಪರ್ಕದಲ್ಲಿದ್ದು, ಗಮಕವನ್ನು ನಿತ್ಯ ಅಭ್ಯಾಸ, ಕೇಳ್ಮೆ, ಚಿಂತನೆ ಇವುಗಳಲ್ಲಿ ತೊಡಗಿಸುತ್ತಿರುವುದು ಬಹು ಹೃದ್ಯವಾದ ಕೆಲಸವಾಗಿದೆ.

Smt. Gangamma Keshavamurthy's tenure as President spans from 2017-2020, and again she got re-elected unanimously for a second term, for the period 2020-2023. As a gamaka legend, who lives and breathes gamaka, Smt. Gangamma has been very actively pursuing and promoting gamaka related activities:

Smt. Gangamma’s major and noteworthy contribution is getting an ‘own building’ for Gamaka Kala Parishath. Through her marathon efforts and supplemented by her ‘legendary gamaki face value’, her long standing virtues, charisma, personality – donations poured in from all gamaka lovers.

During the Covid-19 crisis which started around March 2020, Smt. Gangamma started a Parishath WhatsApp group. Not a single day has passed without a gamaka vachana, vyakhyaana – all under the guidance of Smt. Gangamma and Parishath committee – coaching and guiding.. This comprised of lessons – vachana as well as vyakhyaana for all the portions for all five gamaka exams. Hundreds of new gamakies came into the forefront through this opportunity. Needless to mention, all students appearing for Prathama, Pravesha, Prowda, Kajana and Pareena got benefitted by this, alongside teachers as during this difficult time face-to-face teaching was not possible. Thus this serendipitous, opportunity during pandemic was well utilized by Parishath in bringing Gamaka to every door step.