8, Agasthya Enclave,13th Main, Srinagar, BSK I Stage, Bengaluru 560050, Karnataka
Mobile : 9148484146
ಸಾಮಾನ್ಯ ಸಂದೇಹಗಳು / ಪ್ರಶ್ನೆಗಳು
1. ಪರಿಷತ್ ಸದಸ್ಯತ್ವಗಳನ್ನು ನೀಡುತ್ತದೆಯೇ? ಹೌದು ಎಂದಾದರೆ, ಸದಸ್ಯತ್ವ ಶುಲ್ಕ ಎಷ್ಟು?
ಹೌದು. ಪರಿಷತ್ತು ಹಲವು ರೀತಿಯ ಸದಸ್ಯತ್ವವನ್ನು ನೀಡುತ್ತದೆ. ಈಗ ಎಲ್ಲರೂ ಆಜೀವ ಸದಸ್ಯತ್ವವನ್ನೇ ಇಚ್ಛಿಸಿ ಪಡೆಯುತ್ತಿದ್ದಾರೆ. ಪ್ರಸ್ತುತ, ಆಜೀವ ಸದಸ್ಯತ್ವ ಶುಲ್ಕವು ರೂ. ೧,೦೦೦.೦೦ ಆಗಿದೆ. ಎಲ್ಲ ಅಜೀವ ಸದಸ್ಯರೂ ಪರಿಷತ್ತಿನ ಮುಖವಾಣಿ "ಗಮಕ ದುಂದುಭಿ" ತ್ರೈಮಾಸಿಕ ಸುದ್ದಿಪತ್ರಿಕೆಗೆ ಪ್ರತ್ಯೇಕ ಚಂದಾ ಪಾವತಿಸಿ ಪ್ರೋತ್ಸಾಹಿಸಬೇಕೆಂದು ಪರಿಷತ್ತು ಶಿಫಾರಸು ಮಾಡುತ್ತದೆ.
2. ಸದಸ್ಯರಾಗಲು ಯಾವುದೇ ವಯಸ್ಸಿನ ನಿರ್ಬಂಧವಿದೆಯೇ?
ಇದು ಕಲೆಯ ಅನ್ವೇಷಣೆಯಾಗಿರುವುದರಿಂದ ಯಾವುದೇ ವಯಸ್ಸಿನ ನಿರ್ಬಂಧವನ್ನು ನಿರ್ದಿಷ್ಟಗೊಳಿಸಿಲ್ಲ. ಸದಸ್ಯತ್ವವನ್ನು ಎಲ್ಲರೂ ಹೊಂದಬಹುದು.
3. ಗಮಕವನ್ನು ಕಲಿಯಲು ಪೂರ್ವಾರ್ಹತೆಗಳು, ವಯೋಮಿತಿಗಳೇನು?
ಅಂತಹ ಯಾವುದೇ ಕಠಿಣವಾದ ಅಥವಾ ಬಿಗಿಯಾದ ಪೂರ್ವಾರ್ಹತೆಗಳ ಅವಶ್ಯಕತೆ ಇಲ್ಲವಾದರೂ, ಚೆನ್ನಾಗಿ ಕಾವ್ಯಗಳನ್ನು ಓದಿ, ಗ್ರಹಿಸಿ, ಹಾಡಲು ಓದುವ ಸಾಮರ್ಥ್ಯವು ಅಗತ್ಯವಾಗಿರುತ್ತದೆ. ಹಾಗಾಗಿ ಆರರಿಂದ ಅರವತ್ತರ ಯಾವುದೇ ಪ್ರಾಯದವರೂ ಗಮಕವನ್ನು ಕಲಿಯುವುದು ಸಾಧ್ಯವಿದೆ.
4. ಪರಿಷತ್ತಿನ ಚಟುವಟಿಕೆಗಳಲ್ಲಿ ನಾನು ಹೇಗೆ ಭಾಗವಹಿಸಬಹುದು?
ಗಮಕ ವಿದ್ಯಾರ್ಥಿಯಾಗಿ, ಶಿಕ್ಷಕರಾಗಿ, ಪ್ರೋತ್ಸಾಹಕರಾಗಿ, ಗಮಕಾಭಿಮಾನಿಯಾಗಿ, ದಾನಿಗಳಾಗಿ - ಯಾವುದೇ ರೀತಿಯಲ್ಲಿ ನಿಮ್ಮ ಪಾತ್ರವನ್ನು ಸ್ವಾಗತಿಸಲಾಗುತ್ತದೆ. ನಿಮ್ಮ ಗಮಕ ಸೇವೆಗೆ ಅವಕಾಶವನ್ನು ಒದಗಿಸಲು ಪರಿಷತ್ತು ಸದಾ ಉತ್ಸುಕವಾಗಿರುತ್ತದೆ.
5. ಪರಿಷತ್ತನ್ನು ನಾನು ಯಾವ ರೀತಿ ಆರ್ಥಿಕವಾಗಿ ಬೆಂಬಲಿಸಬಹುದು?
ದೇಣಿಗೆಗಳು, ಪ್ರಾಯೋಜಕತ್ವ, ಕಾರ್ಯಕ್ರಮಗಳ ಆಯೋಜನೆ ಮತ್ತು ಇತರ ಹಲವು ವಿಧಾನಗಳ ಮೂಲಕ ನೀವು ಪರಿಷತ್ತನ್ನು ಬೆಂಬಲಿಸಬಹುದು.
6. ಪರಿಷತ್ತು ಖಾಸಗಿ ವೇದಿಕೆಗಳಲ್ಲಿ, ಮನೆಗಳಲ್ಲಿ ಗಮಕ ಕಾರ್ಯಕ್ರಮಗಳನ್ನು ಆಯೋಜಿಸಬಹುದೇ?
ವಾಸ್ತವವಾಗಿ ಗಮಕ ಪ್ರಚಾರ-ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಪರಿಷತ್ತು, ಸಾಮಾಜಿಕರು ತಮ್ಮ ಕುಟುಂಬದ ಖಾಸಗಿ ಕಾರ್ಯಕ್ರಮಗಳಲ್ಲಿ ಗಮಕದ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಪ್ರೋತ್ಸಾಹಿಸುತ್ತದೆ. ಪರಿಷತ್ತು ಇದುವರೆಗೆ ವೈಕುಂಠ ಸಮಾರಾಧನೆ, ಉಪನಯನ, ಸೀಮಂತ, ಇಂತಹ ಹಲವಾರು ಮಂಗಳಕರ ಕೌಟುಂಬಿಕ ಸಂದರ್ಭಗಳಲ್ಲಿ ಗಮಕ ಕಾರ್ಯಕ್ರಮಗಳನ್ನು ನೀಡಿದೆ.
7. ಬೆಂಗಳೂರಿನ ಹೊರಗೆ ವಾಸಿಸುತ್ತಿರುವ ನಾನು ಪರಿಷತ್ತಿನ ಚಟುವಟಿಕೆಗಳಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು?
ನಿಮ್ಮ ಜಿಲ್ಲೆಯ ಜಿಲ್ಲಾ ಘಟಕದ ಅಧ್ಯಕ್ಷರನ್ನು ಅಥವಾ ಬೆಂಗಳೂರಿನಲ್ಲಿರುವ ಕೇಂದ್ರ ಪರಿಷತ್ತಿನ ಕಚೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು. ನಿಮ್ಮ ಆಸಕ್ತಿ ಯಾವಾಗಲೂ ಮೌಲಿಕವಾದುದು. ನಿಮ್ಮಂಥವರ ಆಸಕ್ತಿಯೇ ಪರಿಷತ್ತಿನ ಶಕ್ತಿ.
8. ಪರಿಷತ್ತಿನ ಅಡಿಯಲ್ಲಿ ಗಮಕ ತರಗತಿಗಳನ್ನು ನಡೆಸಲು ನನಗೆ ಅವಕಾಶವಿದೆಯೇ?
ನೀವು ಗಮಕ ವಾಚನ ಕಲೆಯಲ್ಲಿ ಉತ್ತಮ ತರಬೇತಿ ಪಡೆದಿದ್ದರೆ, ಸೊಗಸಾದ ಭಾವಪೂರ್ಣ ವಾಚನ ನಿಮ್ಮದು ಎಂಬ ಭರವಸೆಯಿದ್ದರೆ, ಗಮಕ ತರಬೇತಿ ಕೇಂದ್ರವನ್ನು ನಡೆಸಲು ನಿಮಗೆ ಹಾರ್ದ ಸ್ವಾಗತ. ಹಾಗೆಯೇ ನೀವು ತರಬೇತಿ ಕೇಂದ್ರವನ್ನು ನಡೆಸಬೇಕಾದರೆ ಅದರ ರೂಪುರೇಷೆಗಳನ್ನು ಕುರಿತು ಪರಿಷತ್ತಿನ ಜೊತೆಗೆ ಚರ್ಚಿಸಿ, ಅಧಿಕೃತವಾಗಿ ಪ್ರಾರಂಭಿಸಬಹುದು. ಪರಿಷತ್ತಿನ ನೀತಿ-ನಿಯಮಗಳಿಗೆ, ಶೈಕ್ಷಣಿಕ ಪದ್ಧತಿಗಳಿಗೆ ಒಳಪಟ್ಟ ಅಂಥ ಕೇಂದ್ರವನ್ನು ಪರಿಷತ್ತಿನ ಕೇಂದ್ರ ಕಾರ್ಯಾಲಯದಿಂದ ಘೋಷಿಸಲಾಗುವುದು.