Raga perceptive skills made easy and faster by learning Gamaka Kale

ಗಮಕ ಕಲೆ ಕಲಿಯುವಿಕೆಯಿಂದ ರಾಗ ಗ್ರಹಿಕೆ ಸುಲಭ ಮತ್ತು ತ್ವರಿತ

Management Team

ಕಾರ್ಯನಿರ್ವಹಣಾ ತಂಡ

Karnataka Gamaka Kala Parishath Committee Members:

ಕರ್ನಾಟಕ ಗಮಕ ಕಲಾ ಪರಿಷತ್ ಸಮಿತಿ ಪದಾಧಿಕಾರಿಗಳು:

 • Smt. Gangamma Keshavamurthy
  President
 • ಶ್ರೀಮತಿ ಗಂಗಮ್ಮ ಕೇಶವಮೂರ್ತಿ
  ಅಧ್ಯಕ್ಷರು
 • Smt. Jayalakshmi Gopinath
  Vice President
 • ಶ್ರೀಮತಿ ಜಯಲಕ್ಷ್ಮೀ ಗೋಪಿನಾಥ್
  ಉಪಾಧ್ಯಕ್ಷರು
 • Smt. Vijaya Ranganath
  Treasurer
 • ಶ್ರೀಮತಿ ವಿಜಯಾ ರಂಗನಾಥ್
  ಖಜಾಂಚಿ
 • Sri. Dakshina Murthy
  Secretary
 • ಶ್ರೀ ಜಿ.ಡಿ.ದಕ್ಷಿಣಾ ಮೂರ್ತಿ
  ಕಾರ್ಯದರ್ಶಿ
 • Sri. Santhosh Bharadwaj
  Asst. Secretary
 • ಶ್ರೀ ಸಂತೋಷ್ ಭಾರಧ್ವಾಜ್
  ಸಹ ಕಾರ್ಯದರ್ಶಿ
Parishath’s District Presidents ಪರಿಷತ್ತಿನ ಜಿಲ್ಲಾ ಅಧ್ಯಕ್ಷರು

About the President …

Familiar to the gamaka world as Captain Gamaki – Smt. Gangamma Keshavamurthy’s contribution to the gamaka field is par excellence. Smt. Gangamma had previously served as the head of ‘Karnataka Sangeetha Mattu Nrutya Academy’ in the fine arts field. Currently, she is heading Karnataka Gamaka Kala Parishath, as the President since 2017.

Few words would not suffice to describe Smt. Gangamma Keshavamurthy’s lifetime achievements. Her services towards carnatic music, gamaka in particular, spans over 75 years. She has rendered in well over 5000 gamaka vachana programs – at equal ease with both vaachana and vyakhyaana. She has bagged several awards from Karnataka State government like Karnataka Kalashree, and Kumaravyasa Prashasti - the award meant for outstanding contribution to gamaka field, apart from innumerable titles(birudugalhu) that she has been conferred with.

In her previous tenure 2017-2020, as President, Smt. Gangamma got Karnataka Gamaka Kala Parishath, an own building through donations only. This is a no mean achievement by any standard. Now even in her eighties, her unrelenting commitment, passion, hardwork are unmatchable – a role model for youngsters and older ones alike. During corona times since 2020, her unwavering focus has resulted in daily gamaka programs beamed through social media platforms like Whatsapp, Facebook. Also, she has provided all junior, senior gamaka artists constant encouragement through opportunities and through teaching.

Let gamaka prosper, flourish, fly high in her current tenure, similar to her tenure during 2017-2020.

"ಸಿರಿಗನ್ನಡಂ ಗೆಲ್ಗೆ; ಗಮಕಕಲೆ ಬಾಳ್ಗೆ"

ಅಧ್ಯಕ್ಷರ ಬಗ್ಗೆ ....

ಕ್ಯಾಪ್ಟನ್ ಗಮಕಿ ಎಂದೇ ಪ್ರಸಿದ್ಧರಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಅವರು ಗಮಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹೆಗ್ಗಳಿಕೆ ಇವರದಾಗಿದ್ದು ಪ್ರಸ್ತುತ ಅಖಿಲ ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರ ಬದುಕು ಮತ್ತು ಸಾಧನೆ ವಿವರಿಸಲು ಕೆಲವೇ ಮಾತುಗಳಲ್ಲಿ ಖಂಡಿತಾ ಸಾಲದು. ಸುಮಾರು ೭೫ ವರ್ಷಗಳ ಕಾಲದ ಸಂಗೀತ, ಗಮಕ ಸೇವೆ ಇವರದು. ೫೦೦೦ ಕ್ಕೂ ಹೆಚ್ಚು ಗಮಕ ಕಾರ್ಯಕ್ರಮಗಳನ್ನು ಇಲ್ಲಿಯವರೆಗೂ ನಡೆಸಿದ್ದು ವಾಚನಕ್ಕೂ ಸೈ, ವ್ಯಾಖ್ಯಾನಕ್ಕೂ ಸೈ ಎನ್ನಿಸಿಕೊಂಡವರು. ಗಮಕ ಕ್ಷೇತ್ರದ ಸಾಧಕರಿಗಾಗಿಯೇ ನೀಡುವ ಪ್ರತಿಷ್ಠಿತ ಗಮಕ ಪ್ರಶಸ್ತಿಯಾದ ಕುಮಾರವ್ಯಾಸ ಪ್ರಶಸ್ತಿಯೂ ಸೇರಿದಂತೆ ಕರ್ನಾಟಕ ಕಲಾಶ್ರೀ ಹಾಗೂ ಹಲವಾರು ಬಿರುದುಗಳಿಂದ ಮತ್ತು ಸನ್ಮಾನಗಳಿಂದ ಗೌರವಿಸಲ್ಪಟ್ಟಿದ್ದಾರೆ.

2017-2020ರ ತಮ್ಮ ಅಧ್ಯಕ್ಷಾವಧಿಯಲ್ಲಿ ಪರಿಷತ್ತಿಗೆ ಸ್ವಂತ ಕಟ್ಟಡವನ್ನು, ದೇಣಿಗೆಗಳ ಮೂಲಕವೇ ಮಾಡಿಕೊಟ್ಟ ಹಿರಿಮೆ, ಶ್ರೇಯಸ್ಸು ಶ್ರೀಮತಿ ಗಂಗಮ್ಮನವರದು. ೮೦ರ ವಯಸ್ಸಿನಲ್ಲೂ ಹದಿಹರೆಯದವರನ್ನೂ ನಾಚಿಸುವ ಹುರುಪು, ಬದ್ಧತೆ ಇವರದು. ಈ ಕರೋನ ಕಾಲದಲ್ಲೂ ಕಿಂಚಿತ್ತೂ ಅಳುಕದೆ ನಿರಂತರ ಉತ್ಸಾಹ ಮತ್ತು ಸತತ ಪರಿಶ್ರಮದಿಂದ ಗಮಕ ಸಂಬಂಧಿ ಹೊಸಹೊಸ ಕಾರ್ಯಕ್ರಮಗಳು ನಡೆಯುತ್ತಲೇ ಇದೆ. ಗಮಕ ಕಾರ್ಯಕ್ರಮಗಳು ವಾಟ್ಸ್ಯಾಪ್, ಅಂತರ್ಜಾಲದ ಮೂಲಕ ಕರ್ನಾಟಕದಾದ್ಯಂತ ಕಿರಿಯ-ಹಿರಿಯ ಗಮಕಿಗಳೆಲ್ಲರನ್ನೂ ಹುರಿದುಂಬಿಸುವ, ಪ್ರೋತ್ಸಾಹಿಸುವ, ಗಮಕ ಕಲಿಸುವ ಕಾಳಜಿ ಎಲ್ಲರಿಗೂ ಅಚ್ಚುಮೆಚ್ಚು.

ಇವರ ಅಧ್ಯಕ್ಶತೆಯಲ್ಲಿ ಕ.ಗ.ಕ.ಪ. ೨೦೧೭-೨೦೨೦ ರಲ್ಲಿ ಬೆಳಗಿದಂತೆ, ೨೦೨೦-೨೦೨೩ ರಲ್ಲೂ ಹೊಳೆಯಲಿ; ಗಮಕ ಕಲೆ ಉಳಿಯಲಿ! ಗಮಕ ಕಲೆ ಬೆಳೆಯಲಿ!

"ಸಿರಿಗನ್ನಡಂ ಗೆಲ್ಗೆ; ಗಮಕಕಲೆ ಬಾಳ್ಗೆ"