Raga perceptive skills made easy and faster by learning Gamaka Kale

ಗಮಕ ಕಲೆ ಕಲಿಯುವಿಕೆಯಿಂದ ರಾಗ ಗ್ರಹಿಕೆ ಸುಲಭ ಮತ್ತು ತ್ವರಿತ

Gamaka Dundubhi

ಗಮಕ ದುಂದುಭಿ

Gamaka Dundubhi Quarterly Newsletters ಗಮಕ ದುಂದುಭಿ ತ್ರೈಮಾಸಿಕ ಪತ್ರಿಕೆ

ಸಂಪಾದಕರ ನುಡಿ…

ಸಹೃದಯ ಗಮಕ ಬಂಧುಗಳೇ,

'ಕನಸು' ಕಾಣುವುದು ಮನುಷ್ಯನ ಸಹಜ ಸ್ವಭಾವ. ನಮ್ಮ ಆಂತರಿಕ ಬಯಕೆಯಿಂದಲೋ, ಇನ್ನು ಕೆಲವೊಮ್ಮೆ ಏನೂ ಕಾರಣವಿಲ್ಲದೆಯೋ, ಬಹಳಷ್ಟು ಕನಸು ಕಾಣುತ್ತೇವೆ. ಆದರೆ ಬದುಕಿಗೊಂದು ಅರ್ಥ ಕೊಡುವ, ನಾಲ್ಕು ಜನರು ಮೆಚ್ಚಿಕೊಳ್ಳುವ, ಆತ್ಮ ತೃಪ್ತಿಯೊಂದಿಗೆ ಕೆಲವರಿಗಾದರೂ ನೆರವಾಗುವ, ಸಾರ್ಥಕ ಕಾರ್ಯವನ್ನು ಮಾಡುವಂತಹ ಕನಸು ಕಾಣುವುದೇ 'ಸಮರ್ಥ ಕನಸು'.

ಬಹುಶಃ ಅಂತಹ ಸಮರ್ಥ ಕನಸೇ ಗಮಕ ದುಂದುಭಿ ಹೊಸರೂಪದಲ್ಲಿ ಬರುವ ಮೂಲಕ ನನಸಾದದ್ದು ವಿಶೇಷ..!  

ಗಮಕ ಕಲೆಯ ಉಳಿವು ಮತ್ತು ಬೆಳವಣಿಗೆಗಾಗಿಯೇ ಹುಟ್ಟಿದ ಕರ್ನಾಟಕ ಗಮಕ ಕಲಾ ಪರಿಷತ್ತಿಗೆ ತನ್ನದೇ ಆದ ಇತಿಹಾಸವಿದೆ. ಗಮಕವನ್ನು ಉಸಿರಾಗಿಸಿಕೊಂಡು ನಾಡಿನೆಲ್ಲೆಡೆ ಗಮಕ ಕಲೆಯನ್ನು ಪಸರಿಸಿದ ಗಮಕಿ-ವ್ಯಾಖ್ಯಾನಕಾರರ ಪರಿಶ್ರಮವು ಅಗಾಧವಾಗಿದೆ. ಇಂತಹ ಗಮಕ ಪರಿಷತ್ತು ಪ್ರಾರಂಭದಿಂದಲೂ ಗಮಕ ಸಂಬಂಧಿ ವಿಚಾರಗಳನ್ನು 'ಗಮಕ ದುಂದುಭಿ' ಎಂಬ ತ್ರೈಮಾಸಿಕ ವಾರ್ತಾ ಪತ್ರಿಕೆಯ ಮೂಲಕ ಚಿಕ್ಕದಾಗಿ ಪ್ರಾರಂಭವಾಗಿ ಇಂದು ವರ್ಣರಂಜಿತ ಮುಖಪುಟದೊಂದಿಗೆ ಸಾಕಷ್ಟು ಮಾಹಿತಿಯನ್ನೊಳಗೊಂಡ ಪರಿಷತ್ತಿನ ಅಧಿಕೃತ ತ್ರೈಮಾಸಿಕ ಪತ್ರಿಕೆಯಾಗಿ, ಡಿಜಿಟಲ್ ರೂಪದಲ್ಲೂ ಪ್ರಕಟಗೊಳ್ಳುತ್ತಿದೆ.  

ದಿನದಿಂದ ದಿನಕ್ಕೆ ಸಾಕಷ್ಟು ಗುಣಾತ್ಮಕ ಬದಲಾವಣೆಯನ್ನು ಹೊಂದುತ್ತಾ ಆಕರ್ಷಕ ಹೊರ ಪುಟ ವಿನ್ಯಾಸದೊಂದಿಗೆ ಸಂಗ್ರಹಯೋಗ್ಯ ಲೇಖನಗಳನ್ನು ಒಳಗೊಂಡ ಒಂದು ವಿಶಿಷ್ಟ ಪತ್ರಿಕೆಯಾಗಿ 'ಗಮಕ ದುಂದುಭಿ' ತ್ರೈಮಾಸಿಕ ಪತ್ರಿಕೆ ರೂಪುಗೊಂಡಿದೆ. ಇದು ನನ್ನ ಬಹುದಿನದ ಕನಸು, ಪ್ರಸ್ತುತ ಅಧ್ಯಕ್ಷರ ಒಲವು ಮತ್ತು ನಿಮ್ಮೆಲ್ಲರ ಬಯಕೆಯೇ ಆಗಿದ್ದು, ಪತ್ರಿಕೆಯ ಸಂಪೂರ್ಣ ಜೀವಾಳ ಗಮಕಾಭಿಮಾನಿಗಳೇ ಎಂಬುದು ನನ್ನ ಸ್ಪಷ್ಟ ಅಭಿಮತ.  

ಓದುಗರ ಸಲಹೆ-ಸೂಚನೆಗಳಿಗೆ ಮುಕ್ತ ಅವಕಾಶವಿದ್ದು; ಪತ್ರಿಕೆಯನ್ನು ಕೊಂಡು ಓದುವ ಜೊತೆಗೆ ಇತರರನ್ನು ಗಮಕ ಕಲೆಯ ಕಡೆಗೆ ಸೆಳೆಯುವಂತೆ ನಾವೆಲ್ಲಾ ಪ್ರಯತ್ನಿಸೋಣ. ಪರಿಷತ್ತಿನ ಆಜೀವ ಸದಸ್ಯತ್ವದೊಂದಿಗೆ ಪತ್ರಿಕೆಯ ಸದಸ್ಯತ್ವವನ್ನೂ ಪಡೆದುಕೊಂಡು ಗಮಕ ಕಲೆಯ ಬೆಳವಣಿಗೆಗೆ ನಾವೆಲ್ಲರೂ ಒಟ್ಟಾರೆ ಶ್ರಮಿಸೋಣ; ಸುಸಂಸ್ಕೃತ ಸಮಾಜವನ್ನು ಕಟ್ಟೋಣ.    

ಬೆಳಕಾಗಲಿ ಬದುಕು ತಮದ ಛಾಯೆಯ ನಡುವೆ
ಉಸಿರಾಗಲಿ ಜೀವ ನೊಂದಿಹ ಜೀವಜಾಲಗಳಿಗೆ
ರವಿಯಂತೆ ಶಶಿಯಂತೆ ಧ್ರುವತಾರೆಗಳೇ ನೀನಾಗು
ಹಣತೆಯಂತಾದರೂ ಆಗು ಜಗಕೆ-'ಶ್ರೀರಂಗ ತನಯ'    

ಗಮಕ ಕಲಾರಾಧಕ
ವಿದ್ವಾನ್ ಕೃ.ಪಾ. ಮಂಜುನಾಥ್
ಉಪನ್ಯಾಸಕರು ಮತ್ತು ಗಮಕ ವ್ಯಾಖ್ಯಾನಕಾರರು

Editor’s Note…

Beloved Gamaka Lovers,

Every dream begins with a dreamer! Dreaming could be an outcome of a deep inner desire or at times could arise without any rhyme or reason. All of us do dream!!!. However, one that is meaningful, admired by the audience, brings about the soul satisfaction and useful to at least a few, is really a ‘fulfilling dream’ in life.

Perhaps such a fulfilling dream has blossomed and fructified itself as ‘Gamaka Dundubhi’.  

Gamaka Kala Parishath was formed with the primary intent of sustaining and promoting Gamaka art, which has its own legendary history roots attributed to it. The humongous contribution by passionate gamakies (who literally ‘breathe and live gamaka’) in propagating gamaka across Karnataka is noteworthy. Continuing in the same footsteps, Parishath also started a newsletter. What started in a modest manner, has eventually bloomed into a colourful, attractive quarterly newsletter – filled with useful repository of information regarding gamaka – both in digital as well as printed media.  

Our Gamaka Dundubhi has shown a lot of positive growth over the last few years – with noteworthy articles from esteemed gamakies. Thus, in a way, Dundubhi has fulfilled the dreams of the Parishath President, me and all Gamaka art lovers as well. It’s my firm belief that , all of you – readers, are the heart and soul of this newsletter.  

Any suggestions for improvement or enhancements are greatly welcome. Such feedback would go a long way in enhancing the quality, and hence the subscription of Gamaka Dundubhi and thus promote Gamaka art. Also, alongside the life membership of gamaka, your kind co-operation is sought to increase the membership of ‘Gamaka Dundubhi’. Come all, let us together strive hard to build a society that fosters legendary arts and culture.    

ಬೆಳಕಾಗಲಿ ಬದುಕು ತಮದ ಛಾಯೆಯ ನಡುವೆ
ಉಸಿರಾಗಲಿ ಜೀವ ನೊಂದಿಹ ಜೀವಜಾಲಗಳಿಗೆ
ರವಿಯಂತೆ ಶಶಿಯಂತೆ ಧ್ರುವತಾರೆಗಳೇ ನೀನಾಗು
ಹಣತೆಯಂತಾದರೂ ಆಗು ಜಗಕೆ-'ಶ್ರೀರಂಗ ತನಯ'    

Gamaka’s ardent lover,
Vidwan Kru. Pa. Manjunath
Lecturer and Gamaka Vyakhyaanakaararu